Saturday, January 31, 2009

ಎಂಟು

"ಹೆಂಡತಿಯರನ್ನು ಪ್ರಾಣಿಗಳಿಗೆ ಹೋಲಿಸಬಾರದು.. ಅವು ಬೇಸರಿಸಿಕೊಳ್ಳುತ್ತವೆ.. ಪಾಪ"

Thursday, January 29, 2009

ಏಳು

"ಬಸ್ಸಿನಲ್ಲಿ ಚಲಿಸುತ್ತಿರುವಾಗ ಚಾಲಕರನ್ನು ಮಾತನಾಡಿಸಬಾರದು ಎಂಬುದು ರೂಲ್ಸ್ ಆದರೆ ಚಾಲಕರಿಗೆ ಕೇಳುವಂತೆ ದೊಡ್ಡಾದಾಗಿ ಮಾತನಾಡಬಾರದು ಎಂಬುದು ರೂಲ್ಸ್ ಅಲ್ಲ."

Tuesday, December 30, 2008

ಆರು



"ಆಗಸ್ಟ್ ಹದಿನೈದಕ್ಕೆ ಮದುವೆಯಾದರೆ ಸ್ವಾತಂತ್ರ್ಯ ಬಂದ ದಿನ ಹಾಗೂ ಹೋದ ದಿನವನ್ನು ಒಟ್ಟಿಗೆ ಆಚರಿಸಬೇಕಾಗುತ್ತದೆ"

Friday, December 12, 2008

ಐದು



" ಗಿಡವನ್ನು ಬಗ್ಗಿಸಿಯೇ ಇಟ್ಟರೆ ಅದು ಮರವಾಗುವುದಿಲ್ಲ.."

Tuesday, December 9, 2008

ನಾಲ್ಕು



"ರಶ್ಶಾಗಿರುವ ಬಸ್ ಹತ್ತಿದರೆ ಬಸ್ ಇನ್ನೂ ರಶ್ಶಾಗುತ್ತದೆ"

Saturday, December 6, 2008

ಮೂರು



"ಸಮಾಜ ಕನ್ನಡಿಯಂತೆ .. ನಮ್ಮನ್ನು ನಾವು ಕಂಡುಕೊಳ್ಳಲು ಎದುರಿಗೆ ಹೋಗಿ ನಿಲ್ಲಬೇಕು .. ಅದೂ ಹಗಲಿನಲ್ಲಿ.. "

Tuesday, December 2, 2008

ಎರಡು


"ಯಾವಾಗಲೂ ನಾವು ಹತ್ತುವ ಬಸ್ಸೇ ರಶ್ಶಾಗಿರುತ್ತದೆ... ಬೇರೆಯವರ ಪ್ಲೇಟಿನಲ್ಲಿರುವ ಪೂರಿಯೇ ಉಬ್ಬಿರುತ್ತದೆ."

Monday, November 24, 2008

ಒಂದು

"ಹೆಚ್ಚಿನ ಜನರನ್ನು ಹೆಚ್ಚಾಗಿ ಕಾಡುವ ಶಬ್ದ ಮೌನ!"

Saturday, November 22, 2008

ಸೊನ್ನೆ

"ಸುಮ್ನೆ ಮಾತಾಡಬಾರದು.. ಆದರೆ ಮಾತಾಡುವುದೆಂದರೆ ಸುಮ್ಮನೆ ಅಲ್ಲಾ... ಮಾತಾದವು ಎಂದರೂ ಸುಮ್ಮನೆ ಅಲ್ಲ.. "

ಹೀಗೆ ಮಾತನಾಡಿದರೆ ನಿಮಗಿಷ್ಟವಾದರೆ ಇದನ್ನು ಓದಿ.. ನಾನು ಹಲಬುತ್ತೇನೆ....

ಒಮ್ಮೆ ಓದಿ... ಅರ್ಥವಾದರೆ ಒಳ್ಳೆಯದು..ಅರ್ಥವಾಗದಿದ್ದರೆ ಇನ್ನೂ ಒಳ್ಳೆಯದು...ಯಾರದ್ರೂ ಬೇರೆಯವರಿಗೆ ತೋರಿಸಿ ...ಅವರಿಗೆಕೇಳಿ... ಅವರಿಗೂ ಅರ್ಥವಾಗದಿದ್ದರೆ ಇಬ್ಬರೂ ಸೇರಿ ನಗ್ರಿ... ಅವರಿಗೆನಾದ್ರೂ ಅರ್ಥವಾದರೆ ಅವರತ್ರ ಕೇಳಿ ತಿಳ್ಕೊಳ್ಳಿ..

ನನಗಿದಕ್ಕೆ ಸ್ಪೂರ್ತಿ ವಿಶ್ವೇಶ್ವರ ಭಟ್ರು.. ಅವರ ವಕ್ರತುಂಡೋಕ್ತಿಗಳನ್ನೆಲ್ಲಾ ಓದುತ್ತಿರಬೇಕಾದ್ರೆ ನನಗೆಹೊಳೆದದ್ದು..ಮಿನುಗಿದ್ದು..ಇಲ್ಲಿವೆ...

ಇದರಲ್ಲಿ ಯಾರನ್ನೂ ಟೀಕಿಸುವ ಯೋಚನೆ ನನಗಿಲ್ಲ.. ಸುಮ್ಮನೆ ತಮಾಷೆಗೆ ಅಂತ ಬರೆದಿದ್ದು..ನಿಮಗೆ ಬೇಜಾರಾದ್ರೆ ನನಗೊಂದುಕಾಮೆಂಟ್ ಬರ್ದಾಕಿ..ಬಯ್ದು ಬಿಡಿ.. ಖುಷಿ ಆದ್ರೆ ಎರಡೆರಡು ಕಾಮೆಂಟ್ ಬರೀರಿ.. ನನ್ ಹೆಸರಲ್ಲೊಂದು ನಿಮ್ಮೆಸ್ರಲ್ಲೊಂದು..

ಸ್ಯಾ೦ಪಲ್ಲಿ ಗೆಂದು ಒಂದು ಇಲ್ಲಿದೆ..

" ಹೊಟ್ಟೆ ತುಂಬುವಷ್ಟು ತಿನ್ನಬೇಕೆ ಹೊರತು ಹೊಟ್ಟೆ ತಿನ್ನುವಷ್ಟೂ ತುಂಬಬಾರದು...."